ಹಾಲಿನದರ ಹೆಚ್ಚಳ ಖಂಡಿಸಿ ಸುಳ್ಯ ಶಾಸಕಿ ಸೇರಿದಂತೆ ಮಹಿಳಾ ಮೋರ್ಚಾ ಬಿಜೆಪಿ ಸುಳ್ಯ ಮಂಡಲ ವತಿಯಿಂದ ಪ್ರತಿಭಟನೆ -ತಹಶೀಲ್ದಾರ್ ಗೆ ಮನವಿ.

ಕಡಬ :ಜು,2.ಮಹಿಳಾ ಮೋರ್ಚಾ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಕಡಬ ತಾಲೂಕು ಕಚೇರಿ ಎದುರು ಕಣ್ಣ ಚಹಾ ಕುಡಿದು ಪ್ರತಿಭಟನೆ ಮಾಡಿದರು.Img 20240702 Wa0016ಹಾಲಿನ ದರ ಏರಿಕೆ ಮತ್ತು ಹಾಲು ಉತ್ಪಾದಕರಿಗೆ ಸಹಾಯಧನ ಕ್ಲಪ್ತ ಸಮಯದಲ್ಲಿ ನೀಡದ ಕುರಿತು ಪ್ರತಿಭಟನೆ ನಡೆಸಲಾಯಿತು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು,ಅರ್ಧ ಲೀಟ‌ರ್ ಹಾಲಿನ ದರವನ್ನು ರೂ. 2ರಷ್ಟು ಹೆಚ್ಚಿಸಿದ್ದು ಗ್ರಾಹಕನಿಗೆ ಹೊರೆಯಾಗಿದೆ.

ಹಾಲು ಉತ್ಪಾದಕರಿಗೆ ಸುಮಾರು 10 ತಿಂಗಳಿನಿಂದ ಸಹಾಯ ಧನವನ್ನು ನೀಡುವಲ್ಲಿ ವಿಳಂಬಿಸುತ್ತಿದೆ. ಇದರಿಂದ ರೈತರೂ ಕಂಗಾಲಾಗಿದ್ದಾರೆ.

ಗ್ರಾಹಕನಿಗೆ ಕೈಗೆಟುಕುವ ಬೆಲೆಯನ್ನು ಹಾಲಿಗೆ ನಿಗದಿಪಡಿಸಬೇಕು ಮತ್ತು ಕೂಡಲೇ ರೈತರ ಹಾಲಿನ ಖರೀದಿ ದರವನ್ನು ಹೆಚ್ಚಿಸುತ್ತಾ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಅಗ್ರಹಿಸಿದರು,ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗಳನ್ನು ನಡೆಸುತ್ತೇವೆ ಎಂದು ರಾಜ್ಯ ಸರಕಾರ ಹಾಲಿನ ದರ ಏರಿಕೆ ಮತ್ತು ಹಾಲು ಉತ್ಪಾದಕರಿಗೆ ಸಹಾಯಧನ ಕ್ಲಪ್ತ ಸಮಯದಲ್ಲಿ ನೀಡದ ಕುರಿತು ದಿಕ್ಕಾರ ಕೂಗಿದರು ಎಲ್ಲರಿಗೂ ಕಣ್ಣ ಚಹ ನೀಡಿ ವಿನೂತನ ಪ್ರತಿಭಟನೆ ಮಾಡಿದರು.

Img 20240702 Wa0017ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಗೀರಥಿ ಮುರುಳ್ಯ ಅವರು ಹೇಳಿದರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇರುವಾಗ ರೈತರಿಗೆ ಪ್ರೋತ್ಸಾಹ ಧನವಾಗಿ ಲೀಟರ್ ಗೆ ಎರಡು ರೂಪಾಯಿ ಕೊಡುತ್ತಿದ್ದರು, ಅದನ್ನು ಈ ಸರಕಾರ ನಿಲ್ಲಿಸಿದೆ.ಇವತ್ತು ಗ್ರಾಹಕರಿಗೆ ಹೊಡೆತ ಆಗಿದೆ.ಅವರ ಮೇಲೆ ಎರಡು ರೂಪಾಯಿ ಹಾಕಿದ್ದಾರೆ, ಅಹಣವನ್ನು ನೇರ ನಮ್ಮ ರೈತರಿಗೆ ಕೊಡಬೇಕು ಎನ್ನುವ ಅಗ್ರಹ ನಮ್ಮದಾಗಿದೆ,ಅದಕ್ಕಾಗಿ ನಾವು ಇವತ್ತು ಹೊರಟ ಮಾಡುತ್ತಿದ್ದೇವೆ,ಡಿಸಿಲ್, ಪೆಟ್ರೋಲ್, ಬೆಲೆ ಏರಿಕೆ ಮಾಡಿ ನಮ್ಮ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದ್ದಾರೆ,ರೈತರಿಗೆ ಒಳ್ಳೆ ಯೋಜನೆ ತರಬೇಕಾದ ಈ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು, ಕಾನೂನು ಅನ್ನು ಮಾಡುತ್ತಿದೆ.ಇವತ್ತು ಭಾಗ್ಯ ಭಾಗ್ಯ ಎಂದು ಹೇಳಿ ಯಾರಿಗೂ ದುಡ್ಡು ಬರುತ್ತಿಲ್ಲ ಹತ್ತು ತಿಂಗಳಿಂದ ಎರಡು ಸಾವಿರ ಯಾರಿಗೂ ಬರೋದೇ ಇಲ್ಲ ಮೋಸಮಾಡಿದ್ದಾರೆ.ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಮಾಡುವ ಸಿದ್ದರಾಮಯ್ಯ, ಇದೆಲ್ಲ ಯಾಕೆ ಕಾಣಲ್ಲ ನಾವು ಮಹಿಳೆಯರು ಮೂರ್ಖರಲ್ಲ, ಸದೃಢರು.ಇದ್ದೇವೆ. Img 20240702 150248

ಇಂದು ಸಂಕೇತಿಕವಾಗಿ ಹೊರಟ ಮಾಡುತ್ತಿದ್ದೇವೆ, ಮುಂದಿನ ದಿನ ಉಗ್ರಹೊರಟ ಮಾಡುತ್ತೇವೆ ಎಂದರು.

Img 20240702 150316

ಈ ಸಂದರ್ಭದಲ್ಲಿ ಸುಳ್ಯ ಬಿ ಜೆ ಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ,ಮಾಜೀ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾತಿಮ್ಮಪ್ಪ, ಮಾಜೀ ತಾಲೂಕು ಪಂಚಾಯತ್ ಅಧ್ಯಕ್ಷೆ ಪುಲಸ್ಯ ರೈ,ಮಾಜೀ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ತೇಜಸ್ವಿನಿ ಶೇಖರ್ ಕಟ್ಟಪುಣಿ, ಉಪಾಧ್ಯಕ್ಷರಾದ ಶುಭದಾ ಎಸ್. ರೈ,  ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ರಾದ ಪುಷ್ಪಮೆದಪ್ಪ ಎಲ್ಲಾ ಸದಸ್ಯೆಯಾರು ಪ್ರತಿಭಟನೆ ಯಲ್ಲಿ ಪಾಲ್ಗೊಂಡರು.

Img 20240702 Wa0018

Img 20240702 Wa0015

0 ಕಾಮೆಂಟ್‌ಗಳು