ಕಡಬ :ಜು,17, ಇಚ್ಲಂಪಾಡಿ ಪರಿಸರದಲ್ಲಿ ಭಾರಿ ಮಳಯಾಗುತ್ತಿದ್ದು, ಮಳೆ ಅಬ್ಬರಕ್ಕೆ ನದಿಯಲ್ಲಿ ನೀರು ಏರಿಕೆಯಾಗಿದೆ.
ತೊರೆ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣದಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಕೃಷಿ ಭೂಮಿಯಲ್ಲಿ ನೀರು ತುಂಬಿಕೊಂಡಿದೆ.

ಮಡಿಪು -ಬರೆಮೇಲು ಸಂಪರ್ಕ ರಸ್ತೆಯಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದ್ದು ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವಂತಾಗಿದೆ. ಇಚ್ಲಂಪಾಡಿ ಉಳ್ಳಾಕ್ಲು ದೈವಸ್ತಾನ, ಹೊಸಮನೆ ಮೋನಪ್ಪ ಶೆಟ್ಟಿ, ಮಾನಡ್ಕ ಸಂತೋಷ್ ಪಿಳ್ಳೆಯವರ ತೋಟ ಜಲಾವ್ರತಗೊಂಡಿದೆ.
0 ಕಾಮೆಂಟ್‌ಗಳು