ಪುತ್ತೂರು :ಜು,17,ಪ್ರಥಮ ಏಕಾದಶಿ ಯಾದಾ ಇಂದು ನಾಡಿನೇಲ್ಲೆಡೆ ತಪ್ತ ಮುದ್ರದಾರಣೆ ಕಾರ್ಯಕ್ರಮ,
ಪುತ್ತೂರು ಕೇಮ್ಮಾಯಿ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಶ್ರೀಪತಿ ಬೈಪಾಡಿತ್ತಾಯ, ಶ್ರೀಧರ್ ಬೈಪಾಡಿತ್ತಾಯ,ಅವರು ತಪ್ತ ಮುದ್ರದಾರಣೆ ಕಾರ್ಯಕ್ರಮಕ್ಕೆ ಎಲ್ಲಾರೀತಿಯ ವ್ಯವಸ್ಥೆ ಮಾಡಿದ್ದರು,ಪುರೋಹಿತರು ಬಾಲಕೃಷ್ಣ ಕೆದಿಲಯ ಅವರು ಸುದರ್ಶನ ಹೋಮ ನೆರವೇರಿಸಿದರು.
ಶ್ರೀ ಸುಬ್ರಹ್ಮಣ್ಯ ಮಠದ ಪೀಠಧಿಪತಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು ನೂರಾರು ಸಂಖ್ಯೆ ಯಲ್ಲಿ ನೆರೆದ ಭಕ್ತರಿಗೆ ತಪ್ತ ಮುದ್ರದಾರಣೆ ಮಾಡಿ ಶ್ರೀ ದೇವರ ತೀರ್ಥ ನೀಡಿ ಆಶೀರ್ವದಿಸಿದರು.
ತಪ್ತಮುದ್ರದಾರಣೆ ಬಗ್ಗೆ ಒಂದಿಷ್ಟು ಮಾಹಿತಿ :
ಸಂಸಾರ ದುಃಖ ಸಂತಪ್ತರಾದ ಜೀವಿಗಳು ಭಗವಂತನ ಒಲುಮೆಗೆ ಪಾತ್ರರಾಗಲು ಒದಗುವ ಸುಸಂದರ್ಭ ಇದಾಗಿದೆ. ಆಷಾಢಮಾಸದ ಏಕಾದಶಿಯಂದು ಪರಮಾತ್ಮ ಯೋಗನಿದ್ರೆಗೆ ತೊಡಗುತ್ತಾನೆ. ಆದ್ದರಿಂದ ಭಗವಂತ ಮಲಗಿದರೂ -ಯೋಗ ನಿದ್ರೆ- ನಾವು ಮಲಗದೇ ಎಚ್ಚೆತ್ತು ಸಾಧನೆ ನಡೆಸಿ ಸಾರ್ಥಕ್ಯ ಹೊಂದಬೇಕು ಎಂಬ ಭಾವವಿದೆ. ಆ ಎಚ್ಚರ ಮೂಡಲು ಬಿಸಿಯಾದ ಮುದ್ರೆಯಿಂದ ದೇಹವನ್ನು ಅಂಕಿತಗೊಳಿಸಬೇಕು. ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ ಎಂದು ಹೇಳುತ್ತಾರೆ.

ಆಷಾಢ ಮಾಸ ಪ್ರಥಮ ಏಕಾದಶಿ, ತಪ್ತ ಮುದ್ರಾ ಧಾರಣೆ,ವೈಷ್ಣವರಿಗೆ ಇದು ವಿಶೇಷ ಮಹತ್ವದ್ದು.ಆಷಾಢ ಪ್ರಥಮ ಏಕಾದಶಿ- ತಪ್ತ ಮುದ್ರಾ ಧಾರಣೆ,ಅಷಾಢ ಮಾಸ,ಏಕಾದಶಿ.ಜು,17,ನಾಡಿನೇಲ್ಲೆಡೆ ಮಾಧ್ವ ಮಠಗಳಲ್ಲಿ ಬೆಳಗಿನ ಜಾವದಿಂದಲೇ ತಪ್ತ ಮುದ್ರಾಧಾರಣೆ ನಡೆಯುತ್ತಿದೆ.
ದಕ್ಷಿಣಾಯಾನ ಪ್ರಾರಂಭವನ್ನು ಸೂಚಿಸುತ್ತದೆ. ಸೂರ್ಯನು ದಕ್ಷಿಣದ ಕಡೆಗೆ ಸಾಗುತ್ತಾ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ, ಇದನ್ನು ಕರ್ಕಾಟಕ ಸಂಕ್ರಮಣ ಎಂದು ಕರೆಯಲಾಗುತ್ತದೆ. ಉತ್ತರಾಯಣದ ನಂತರ ನಿಖರವಾಗಿ ಆರು ತಿಂಗಳ ನಂತರ ಇದು ಸಂಭವಿಸುತ್ತದೆ. ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೇ ದೇವಿಯ ಪೂಜೆ ಮಾಡುವುದು ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎಂದು ನಂಬಲಾಗಿದೆ. ಈ ಮಾಸದಲ್ಲಿ ಶ್ರೀಹರಿ ವಿಷ್ಣುವಿನ ನಾಮಸ್ಮರಣೆ ಹಾಗೂ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ವಿಶೇಷ ಮಹತ್ವವಿದೆ. ಈ ತಿಥಿಯನ್ನು ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮಹಾ ವಿಷ್ಣುದೇವರಿಗೆ (ಭಗವಂತನಿಗೆ) ಸಮರ್ಪಿಸಲಾಗಿದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿ ತಿಥಿಗಳಿವೆ. ಅಂದರೆ ಪ್ರತಿ ತಿಂಗಳು 2 ಏಕಾದಶಿ ತಿಥಿಗಳು ಬರುತ್ತವೆ. ಒಂದೊಂದು ಏಕಾದಶಿಯನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ.
ಈ ಪವಿತ್ರ ದಿನವು ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ.ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ. ಸುದರ್ಶನ ಹೋಮ ಮಾಡಿ ಗುರುಗಳಿಂದ ಅಭಿಮಂತ್ರಿತವಾದ ಮುದ್ರೆಯನ್ನು ಧರಿಸಬೇಕು. ಇದರಿಂದ ಈ ದೇಹ ಪರಮಾತ್ಮನಿಗೆ ಸೇರಿದ್ದು ಎಂದು ಸೂಚಿಸಿದಂತೆಯೇ ನಮ್ಮ ಪಾಪಗಳೆಲ್ಲಾ ಬಿಸಿಮುದ್ರೆಯಿಂದ ಸುಟ್ಟು ಹೋಗಿ ನಾವು ವಿಷ್ಣುವಿನ ಸೇವೆಗೆ ಅರ್ಹರಾಗುತ್ತೇವೆ. ಮುದ್ರಾಧಾರಣೆಗೆ ಬಳಸುವ ಸುದರ್ಶನ ಮತ್ತು ಪಾಂಚಜನ್ಯ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ಮೈ ಮೇಲೆ ಮುದ್ರೆ ಹಾಕಲಾಗುತ್ತದೆ. ಬಲ ಭುಜ, ಬಲಸ್ತನ ಭಾಗದಲ್ಲಿ ಚಕ್ರವನ್ನು, ಎಡ ಭುಜ, ಎಡ ಸ್ತನ ಭಾಗದಲ್ಲಿ ಶಂಖವನ್ನು, ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಗುರುಗಳು ಮುದ್ರೆ ಹಾಕುತ್ತಾರೆ.
ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರ, ಸ್ತ್ರೀಯರಿಗೆ ಬಲ, ಎಡ ಕೈಗಳ ಮೇಲೆ ಮಾತ್ರ ಕ್ರಮವಾಗಿ ಚಕ್ರ ಶಂಖಗಳನ್ನು ಮುದ್ರೆ ಹಾಕುತ್ತಾರೆ.
0 ಕಾಮೆಂಟ್‌ಗಳು