ಕಡಬ ಠಾಣೆಯಿಂದ ವರ್ಗಾವಣೆ ಗೊಂಡ ಅಧಿಕಾರಿಗಳಿಗೆ -ರಾಜ್ಯ ಭೀಮ್ ಆರ್ಮಿ ಸಂಘಟನೆವತಿಯಿಂದ ಸರಳ ಬೀಳ್ಕೊಡುಗೆ ಸಮಾರಂಭ

ಕಡಬ ಠಾಣೆಯಿಂದ ಆರು ಮಂದಿ ಪೊಲೀಸರಿಗೆ  ದ.ಕ ಜಿಲ್ಲೆಯ ವಿವಿಧ ಠಾಣೆಗಳಿಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ24 ರಂದು ಕಡಬ ಠಾಣೆಯಲ್ಲಿ ರಾಜ್ಯ ಭೀಮ್  ಆರ್ಮಿ ಸಂಘಟನೆ  ಆಯೋಜನೆಯಲ್ಲಿ ಸರಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಎಸ್.ಐ ಅಭಿನಂದನ್ ಮತ್ತು ತನಿಖಾ ಎಸ್.ಐ ಅಕ್ಷಯ್ ಡವಗಿ  ನೇತೃತ್ವದಲ್ಲಿ ವರ್ಗಾವಣೆಯಾಗಿರುವ ಪೊಲೀಸರನ್ನು ಸನ್ಮಾನಿಸಿ, ಸ್ಮರಣಿಗೆ ನೀಡಿ ಅಭಿನಂದಿಸಲಾಯಿತು. ಪೊಲೀಸ್ ಸಿಬ್ಬಂದಿಗಳಾದ ಎ ಎಸ್ ಐ ಸುರೇಶ್,ಹೆಡ್ ಕಾನ್ಸ್ಟೇಬಲ್  ಭವಿತ್ ರೈ,  ಕಾನ್ಟೇಬಲ್ ಗಳಾದ  ಚಂದನ್,  ಶ್ರೀಶೈಲ,   ಚಂದ್ರಿಕಾ, ಮತ್ತು  ಭಾಗ್ಯಮ್ಮ  ಅವರನ್ನು ಗೌರವಿಸಲಾಯಿತು.ಕಡಬ ಠಾಣೆಯಲ್ಲಿ ವರ್ಗಾವಣೆಯಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ,ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ಎಸ್.ಐ ಸುರೇಶ್ ಮತ್ತು ಭವಿತ್ ರೈ ಅವರು ಐದು ವರ್ಷಗಳ  ಠಾಣೆಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಎಲ್ಲಾ ಸಿಬ್ಬಂದಿಗಳಿಗೂ ಮುಂದೆಯೂ ಇಂತಹ ಗೌರವ ಸಿಗಲಿ, ಈ ಮೂಲಕ ಕರ್ತವ್ಯ ನಿರ್ವಹಿಸಲು ಸ್ಪೂರ್ತಿಯಾಗಲಿ ಎಂದು ಹೇಳಿ  ಸಂಘಟನೆಯ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಘಟಕದ ಅಧಕ್ಷ  ರಾಘವ ಕಳಾರ ಅವರು ಪರಿಶಿಷ್ಟ ವರ್ಗದ ಜನರಿಗೆ ನ್ಯಾಯ ಒದಗಿಸುವಲ್ಲಿ ಪೊಲೀಸರ ಪಾಲು ಇದ್ದು ಎಲ್ಲಾ ಠಾಣೆಗಳಲ್ಲಿ ಸುಳ್ಳು ದೂರುಗಳು ದಾಖಲಾಗದಂತೆ ತಡೆಯಲು ಸಹಕರಿಸಬೇಕೆಂದರು.ಸಂಘಟನೆಯ ಪ್ರಧಾನ  ಕಾರ್ಯದರ್ಶಿ  ತಾರಾನಾಥ  ಕಡಿರಡ್ಕ  ,  ಸದಸ್ಯ  ಮಹಾಬಲ  ಪಡುಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಠಾಣಾ ಸಿಬ್ಬಂದಿಗಳು,  ಸಂಘಟನೆಯ  ಶೀನ  ಬಾಳಿಲ, ಲೋಕೇಶ್  ಕಡಿರಡ್ಕ, ದಯಾನಂದ  ಕಡಿರಡ್ಕ,  ಯೋಗೀಶ್  ಕಡಿರಡ್ಕ, ಸುಂದರ  ಪುರುಷಬೆಟ್ಟು , ಪ್ರೇಮಾನಾಥ್  ಮರುವಂತಿಲ, ಶೀನಪ್ಪ  ದೇರೋಡಿ, ಅನಂತ  ಆಡಿಲು, ಗಿರಿಜಾ  ಕಕ್ಕೇನಡ್ಕ,  ವಿನಯ  ಆಡಿಲು ಪಾಲ್ಗೊಂಡಿದ್ದರು.

0 ಕಾಮೆಂಟ್‌ಗಳು