ಬೆಂಗಳೂರು:ಜೂ,15,ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ತೆರಿಗೆ ದರವನ್ನು ತಕ್ಷಣದಿಂದ ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನತೆಯ ಜೇಬಿಗೆ ಕತ್ತರಿ ಹಾಕಿದೆ.
ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ 3 ರೂ. ಲೀಟರ್ ಆದರೆ ಡಿಸೇಲ್‌ಗೆ 3.5 ರೂ ಹೆಚ್ಚು ಮಾಡಲಾಗಿದೆ. ಈ ಮೂಲಕ ಪೆಟ್ರೋಲ್ ದರ 102.85 ರೂ. ಆದರೆ ಡಿಸೇಲ್ ದರ 88.93 ರೂ. ಆಗಲಿದೆ.

ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ 25.92% ಇದ್ದದ್ದು, ಈಗ 29.84%ಗೆ ಏರಿಕೆ (3.9%ಹೆಚ್ಚಳ) ಡಿಸೇಲ್ ಈ ಹಿಂದೆ 14.43% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1%ರಷ್ಟು ಏರಿಕೆ). ಈ ಹಿಂದೆಯೇ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಡೆಹಿಡಿಯಲಾಗಿತ್ತು. ಶನಿವಾರ ಇಂದಿನಿಂದಲೇ ಪರಿಸ್ಕೃತ ದರ ಜಾರಿಯಾಗಿದೆ.
0 ಕಾಮೆಂಟ್‌ಗಳು