ಜಿಲ್ಲಾಧಿಕಾರಿ ಬಳಿ ಶಾಲು ಒಡ್ಡಿ ಭಿಕ್ಷೆ ಬೇಡಿದ ವೃದ್ದ ಭಿಕ್ಷುಕ!

ಕುಕ್ಕೆ ಸುಬ್ರಹ್ಮಣ್ಯ: ಬಿಕ್ಷುಕರು ಸಾಮಾನ್ಯವಾಗಿ  ಜನ ಸಾಮಾನ್ಯರಲ್ಲಿ ಅಥವಾ ಅಂಗಡಿಯವರ ಬಳಿ ಬಿಕ್ಷೆ ಬೇಡುವುದನ್ನು ನಾವು ಕಂಡಿದ್ದೇವೆ.ಜನಸಾಮಾನ್ಯರು ಇರಲಿ, ಶ್ರೀ ಮಂತರೇ ಇರಲಿ ಬಿಕ್ಷುಕರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬುದಕ್ಕೆ      ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಬಳಿಯೇ ಬಿಕ್ಷುಕರೊಬ್ಬರು ಬಿಕ್ಷೆ ಬೇಡಿದ ಪ್ರಸಂಗವೊಂದು  ಸಾಕ್ಷಿಯಾಗಿದೆ.

ಈ ಘಟನೆ ಕಡಬ ತಾಲೂಕಿನ  ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವುದಾಗಿದೆ   ಕುಕ್ಕೆ ಸುಬ್ರಹ್ಮಣ್ಯ ದಲ್ಲಿ  ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ  ಹಿನ್ನೆಲೆಯಲ್ಲಿ    ಮೇ 16.ದ.ಕ  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು.ಆದಿಶೇಷ ವಸತಿ ಗೃಹದ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಹೊರ ಬರುವ ವೇಳೆ   ಆದಿ ಸುಬ್ರಹ್ಮಣ್ಯದ ಬಳಿ ಬಿಕ್ಷುಕರೊಬ್ಬರು ಎದುರುಗೊಂಡಿದ್ದಾರೆ.

ಜಿಲ್ಲಾಧಿಕಾರಿಯವರು ಕಾರಿನತ್ತ ಬರುತ್ತಿದ್ದಂತೆ ಬಿಕ್ಷಕರೊಬ್ಬರು ಕೈ ಚಾಚಿದರೂ ಗಮನಿಸಲಿರಲಿಲ್ಲ ಹೀಗಾಗಿ  ಕಾರಲ್ಲಿ ಕುಳಿತ ಬಳಿಕವೂ ಮತ್ತೆ ಶಾಲು ಒಡ್ಡಿದ್ದಾರೆ . ಈ ವೇಳೆ  ಡಿಸಿಯವರು ಕೈಸನ್ನೆಮೂಲಕವೇ ಇಲ್ಲವೆಂದು ಸೂಚಿಸಿದಾಗ ಮತ್ತೆ ಕೈಚಾಚಿದ್ದು ಈ ವೇಳೆ  ಎರಡು ಕೈ ಜೋಡಿಸಿ ನಮಸ್ಕರಿಸಿದ್ದಾರೆ.ಈ ಕುರಿತ ಪೋಟೊ,ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ ಸಂಗ್ರಹವಾದ ಬಿಕ್ಷುಕರ ಕರ ಎಷ್ಟು?:  ಬಿಕ್ಷಾಟನೆ ನಿರ್ಮೂಲನೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.   ಅದರಲ್ಲೂ ಆದಾಯದಲ್ಲಿ ರಾಜ್ಯದ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಂಡಿರುವ   ಪ್ರವಾಸಿ ಕ್ಷೇತ್ರ ಕುಕ್ಕೆ  ಸುಬ್ರಹ್ಮಣ್ಯದಲ್ಲಿ ಬಿಕ್ಷುಕರು,ನಿರ್ಗತಿಕರಿಗೆ ಸೂಕ್ತ ರೀತಿಯ ಯಾವುದೇ ವ್ಯವಸ್ಥೆ ಇಲ್ಲವಾಗಿದೆ.  ವಿಪರ್ಯಾಸವೆಂದರೆ  2022-23ನೇ ಸಾಲಿನಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಒಂದರಲ್ಲೇ ಒಂದು ಲಕ್ಷದ ನಲ್ವತ್ತಾರು ಸಾವಿರ ರೂ ಬಿಕ್ಷುಕರ ಕರ ವಸೂಲಿಯಾಗಿದೆ  . ಇದೆಲ್ಲವೂ ಸರ್ಕಾರದ ಖಜಾನೆಗೆ ಸಂದಾಯವಾಗುತ್ತಿದೆ.  ಈ ಹಿಂದೆ ಬಿಕ್ಷುಕರನ್ನು ಸ್ಥಳೀಯಾಡಳಿತ  ಮಂಗಳೂರಿನ ಪಚ್ಚನಾಡಿ ಬಳಿ ಇರುವ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ದ.ಕ ಜಿಲ್ಲೆಯಲ್ಲಿ ಬಿಕ್ಷುಕರು ಅಲ್ಲಲ್ಲಿ ಕಂಡು ಬರುತ್ತಿದ್ದು ಜಿಲ್ಲಾಡಳಿತ ಸೂಕ್ತವಾಗಿ ವ್ಯ್ವವಸ್ಥೆ ಕಲಿಸಬೇಕೆಂಬ ಆಗ್ರಹ ಸಾರ್ವಜನಿಕರದ್ದಾಗಿದೆ.

0 ಕಾಮೆಂಟ್‌ಗಳು