ಸುಬ್ರಹ್ಮಣ್ಯ :ಮೇ 23.ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಸಂಭ್ರಮ.
ಶ್ರೀ ಸಂಪುಟ ನರಸಿಂಹ ಸ್ವಾಮಿ ದೇವರ ಶ್ರೀ ಮನ್ಮಹಾರಥೋತ್ಸ ಬೆಳಿಗ್ಗೆ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ ಹಾಗೂ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದರು ಕಿರಿಯ ಯತಿಗಳು ಅದಮಾರು ಮಠ ಉಡುಪಿ ದಿವ್ಯ ಉಪಸ್ಥಿಯಲ್ಲಿ.
ಅದ್ದೂರಿ ಯಿಂದ ನೆರವೇರಿತು. ಬೆಳಿಗ್ಗೆ ಸುಮಾರು 9 ಗಂಟೆಗೆ ಶ್ರೀ ದೇವರನ್ನು ಪಲ್ಲಕ್ಕಿ ಯಲ್ಲಿ ರಥಬೀದಿಗೆ ತಂದು ರಥದಲ್ಲಿ ಕಾಶಿಕಟ್ಟೆ ವರೆಗೆ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಮಠದಆಡಳಿತ ಅಧಿಕಾರಿ ಸುದರ್ಶನ್ ಜೋಯಿಸ್,ಗಣ್ಯರಾದ ವೇಣುಗೋಪಾಲ ಆಚಾರ್ ಮೈಸೂರು,
ಮಠದ ಪ್ರಸನ್ನ ಬೆಂಗಳೂರು , ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ,
ಉದ್ಯಮಿ ಯಜ್ಞೇಶ ಆಚಾರ್, ರವಿಕಕ್ಕೇಪದವು, ವಿದ್ವಾಂಸರು,ಗಣ್ಯರು, ಊರ ಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು