ಸುಬ್ರಹ್ಮಣ್ಯ: ಮೇ 21. ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಜರುಗುತ್ತಿರುವ ಶ್ರೀ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ನಡೆಯುತ್ತಿರುವಂತಹ ಶ್ರೀಮದಾನಂದ ತೀರ್ಥ ತತ್ವ ದರ್ಶನಿ ಸಭಾದಲ್ಲಿ ಈ ದಿನ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ, ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಮಹಾಮಹೋಪಾದ್ಯಾಯ, ಹರಿದಾಸ ಭಟ್ ಇವರ ಘನ ಅಧ್ಯಕ್ಷತೆಯಲ್ಲಿ ವಿದ್ವತ್ ಗೋಷ್ಠಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ವಿದ್ವಾಂಸರುಗಳಾದ
ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು ಇಲ್ಲಿನ ನಿವೃತ್ತ ಪ್ರಾಧ್ಯಾಪಕರಾದ ಡಾ! ರಾಮ ವಿಠಲ ಆಚಾರ್ಯ, ಪೂರ್ಣಪ್ರಜ್ಞಾ ವಿದ್ಯಾಪೀಠ, ಬೆಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಡಾ|ತಿರುಮಲ ಆಚಾರ್ಯ ಪೂರ್ಣಪ್ರಮತಿ ಕಲಿಕಾ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಡಾ| ಧನಂಜಯ ಆಚಾರ್ಯ ಭಾಗವಹಿಸಿದ್ದರು.
ಧಾರ್ಮಿಕ ವಿಚಾರಗಳ ಬಗ್ಗೆ ವಿಸ್ತೃತವಾಗಿ ವಿದ್ವಾಂಸರಗಳು ಚರ್ಚಿಸಿದರು. ಈ ಸಂದರ್ಭದಲ್ಲಿ ವೀಕ್ಷಕರು ಕೇಳಿದಂತಹ ಅನೇಕ ಪ್ರಶ್ನೆಗಳಿಗೆ ವಿದ್ವಾಂಸರುಗಳು ಸಮರ್ಪಕ ವಾದ ಉತ್ತರವನ್ನು ನೀಡಿದರು.


ಸಂಜೆ 5 ರಿಂದ 8ರ ವರೆಗೆ ಡಾ|ಮೈಸೂರು ಮಂಜುನಾಥ್ ಹಾಗೂ ವಿದ್ವಾನ್ ಸುಮಂತ ಮಂಜುನಾಥ ಇವರಿಂದ ವಿಶೇಷ ವಯಲಿನ್ ವಾದನ ನೆರವೇರಿತು. ಮೃದಂಗಂ ನಲ್ಲಿ ವಿದ್ವಾನ್ ಟ್ರಿಚಿ ಹರಿ ಕುಮಾರ್ ಚೆನ್ನೈ ಹಾಗೂ ಘಟಂನಲ್ಲಿ ವಿದ್ವಾನ್ ತ್ರಿಪುಣಿತ್ತುರ ರಾಧಾಕೃಷ್ಣನ್ ತಿರುವನಂತಪುರ ಸಹಕರಿಸಿದರು.

ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಎಲ್ಲಾ ಕಲಾವಿದರನ್ನು ಫಲಮಂತ್ರಾಕ್ಷತೆ ನೀಡಿ ಗೌರವಿಸಿದರು.

0 ಕಾಮೆಂಟ್‌ಗಳು