ಸೇವಾರೂಪದಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವರಿಗೆ ನೂತನ ಬಂಡಿ ರಥ

ಸುಬ್ರಹ್ಮಣ್ಯ :ಮೇ.18. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬಂಡಿ ರಥ,

ವೇಮೂ ಸಾಯಿ ಶ್ರೀನಿವಾಸ ರಾಮಲಿಂಗೇಶ್ವರ ರಾವ್  ವರು ಮೂಲತಃ ಆಂಧ್ರಪ್ರದೇಶ ದವರಗಿದ್ದು  ಅಮೇರಿಕದಲ್ಲಿ ಉದ್ಯಮಿಯಾಗಿದ್ದಾರೆ,ಶ್ರೀಯುತರು ಮೇ,27 ಸೋಮವಾರ ದಂದು,ಬಂಡಿ ರಥವನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಿದ್ದಾರೆ.

ಈ ಬಂಡಿ ರಥ ಸುಮಾರು ಹದಿನಾರು ಫೀಟ್ ಎತ್ತರವಿದ್ದು  ಸಾಗುವಾನಿ,ಹೆಬ್ಬಾಲಸು, ಈ ಮರಗಳನ್ನು ಬಳಸಿ ನಿರ್ಮಿಸಲಾಗಿದೆ.12.5 ಲಕ್ಷ  ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ,

ಕೋಟೇಶ್ವರ ಶಿಲ್ಪಿಗಳಾದ ರಾಜಗೋಪಾಲ ಆಚಾರ್ ಹಾಗೂ ಅವರ ಶಿಷ್ಯರು ಕೆತ್ತನೆ ಹಾಗೂ ರಥ ನಿರ್ಮಾಣದ ಕಾರ್ಯ ಮಾಡಿದ್ದಾರೆ.

ಮೇ, 20 ತಾರೀಕಿಗೆ ಸುಮಾರು 3 ಗಂಟೆ ಹೊತ್ತಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತಲುಪಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ  ಆಡಳಿತಧಿಕಾರಿ,ಕಾರ್ಯನಿರ್ವಹಣಾಧಿಕಾರಿ, ದೇವಸ್ಥಾನದ ಸಿಬ್ಬಂದಿ ವರ್ಗದವರು, ಊರಿನ ಮತ್ತು ಪರಊರಿನ ಭಕ್ತರು ಸೇರಿ ನೂತನ ಬಂಡಿ ರಥವನ್ನು ಕಾಶಿಕಟ್ಟೆ ಯಲ್ಲಿ ಸ್ವಾಗತಿಸಲಿದ್ದಾರೆ.

ಕಾಶಿಕಟ್ಟೆ ಯಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ತಂದು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಿದ್ದೇವೆ ಎಂದು ಮೇ,18 ರಂದು ಸೇವಾ ಕರ್ತೃ ಶ್ರೀನಿವಾಸ ರಾಮಲಿಂಗೇಶ್ವರ ರಾವ್  ಅವರ ಆತ್ಮೀಯ ಮೋಹನದಾಸ್ ರೈ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ  ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಹಾಗೂ ಮೇಲುಸ್ತುವಾರಿ ಸಮಿತಿ  ಸದಸ್ಯರಾದ ಸತೀಶ್ ಕುಜುಗೋಡು, ಪವನ್,ಮಾಜೀ ತಾಲೂಕು ಪಂಚಾಯತ್ ಸದಸ್ಯೆ ವಿಮಲಾ ರಂಗಯ್ಯ,ಮಾಜೀ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ದೇವರ ಗದ್ದೆ, ಉಪಸ್ಥಿತಿಯಿದ್ದರು.

0 ಕಾಮೆಂಟ್‌ಗಳು