ಅಲಂಗಾರ್ ನಲ್ಲಿ ಮತದಾನ ಮಾಡುತ್ತಿರುವ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪ

ಕಡಬ :ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕು ಅಲಂಗಾರ್ ಮಾಡಿಯೋಟ್ಟು ನಿವಾಸಿ ಸದಾನಂದ ಕುಮಾರ್  ಎಂಬ ವ್ಯಕ್ತಿ ಭೂತ್ ನಂಬರ್ 59 ರಲ್ಲಿ ತಾನು ಮಾತದಾನ ಮಾಡುವ ಫೋಟೋ ತೆಗೆದು ಸಾಮಾಜಿಕ ಜಾಲತಾಣ ವಾದ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು

ಬಿಜೆಪಿ ಮಹಾಶಕ್ತಿಕೇಂದ್ರ ಕಾರ್ಯದರ್ಶಿ ಅಶೋಕ್ ಕುಮಾರ್ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವಾಟ್ಸ್ ಆಪ್ ಸಂದೇಶದ ಮೂಲಕ ಸರ್ ನಿನ್ನೆ ನಡೆದ ಮತದಾನದ ಫೋಟೋ ವನ್ನು ಫೇಸ್ ಬುಕ್ ನ ಸ್ಟೇಟಸ್ ನಲ್ಲಿ ಹಾಕಿರುವ ಈ ವ್ಯಕ್ತಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸ ಬೇಕಾಗಿ ವಿನಂತಿ ಎಂಬುದಾಗಿ ದೂರು ನೀಡಿದ್ದಾರೆ.

 

 

ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಕಡಬ ತಶೀಲ್ದಾರರಿಗೂ ದೂರು ನೀಡಿದ್ದು ವ್ಯಕ್ತಿಯ ಹೆಸರು ತಂದೆ ಹೆಸರು ಮತ್ತು ಯಾವ ಗ್ರಾಮ ತಿಳಿಸಿ ಸರ್ ಏನೂ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅಶೋಕ್ ಕುಮಾರ್ ಅವರು ಈ ರೀತಿ ಮಾಡಲು ಕಾನೂನುನಲ್ಲಿ ಅವಕಾಶ ಇಲ್ಲ ಮತದಾನ ಗುಪ್ತವಾಗಿ ನಡೆಯಬೇಕು ಇದರ ಬಗ್ಗೆ ನಾಳೆ ಲಿಖಿತ ದೂರು ನೀಡುತ್ತೇನೆ, ಈ ರೀತಿ ಮಾಡಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.

0 ಕಾಮೆಂಟ್‌ಗಳು