ಕಡಬ: ಮಡ್ಯಡ್ಕ ಚುನಾವಣಾ ಬೂತ್ ನಲ್ಲಿ ಮಕ್ಕಳಿಗೇನು ಕೆಲಸ??

ಚುನಾವಣಾ ಸಂದರ್ಭದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ಬಳಸಿಕೊಳ್ಳುವುದು ಸರಿಯೇ??

ಕಡಬ:ಎ.26, ಲೋಕಸಭಾ ಚುನಾವಣೆ ಪ್ರಾರಂಭವಾಗಿದ್ದು ಎಲ್ಲೆಡೆ ಬಿರುಸಿನಿಂದ ಚುನಾವಣೆ ನಡೆಯುತ್ತಿದೆ,

ಈ ಮಧ್ಯೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ ಮಡ್ಯಡ್ಕ ಬೂತ್ ಸಂಖ್ಯೆ 95ರಲ್ಲಿ ಪುಟ್ಟ ಪುಟ್ಟ  ಮಕ್ಕಳು

ಪಕ್ಷದ ಟೋಪಿ ಹಾಕಿಕೊಂಡು ಕೂತಿರುವುದು ಕಂಡು ಬಂದಿದೆ.

ಈ ಚಿತ್ರಗಳನ್ನು ಮೊಬೈಲಲ್ಲಿ ಸೆರೆಹಿಡಿದು ಮತದಾನ ಮಾಡಲು ಬಂದಿರುವ ಮತದಾರರು ಮಾಧ್ಯಮಕ್ಕೆ ನೀಡಿರುತ್ತಾರೆ.

ಪುಟ್ಟ ಪುಟ್ಟ ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.

0 ಕಾಮೆಂಟ್‌ಗಳು