ಸುಬ್ರಹ್ಮಣ್ಯ :ಎ 26.ಕುಕ್ಕೆ ಸುಬ್ರಹ್ಮಣ್ಯ ಎಸ್. ಎಸ್.ಪಿ ಯು ಕಾಲೇಜ್ ಬೂತ್ ಸಂಖ್ಯೆ 115 ರಲ್ಲಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಇದು ಅರ್ಥಪೂರ್ಣ ಆಗಬೇಕು ಅಂತಾದ್ರೆ ಎಲ್ಲ ಪ್ರಜೆಗಳು ತಮ್ಮ ಅಧಿಕಾರವನ್ನು ಚಲಾವಣೆ ಮಾಡಬೇಕು,ಹಾಗಾಗಿ ಮತ ಚಲಾವಣೆ ಬಹುಮುಖ್ಯ ಒಂದು ಅಂಶ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಕಾನೂನು ಜಾರಿಗೆ ತರಬೇಕು, ಇಂತ ರಜಾ ದಿನಗಳಲ್ಲಿ ಓಟು ಹಾಕದೆ ಓಡಾಡುತ್ತಾರೆ.
ಇನ್ನು ಗರಿಷ್ಠ ಮತದಾನ ಆಗಬೇಕು ಪ್ರಜಾಪ್ರಭುತ್ವರಾಷ್ಟ್ರಕ್ಕೆ ಅರ್ಥ ಬರುತ್ತದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಈ ಸಂದರ್ಭದಲ್ಲಿ ಹೇಳಲು ಇಚ್ಛೆ ಪಡುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು