ಕಡಬ :ಹೌದು ನಿಜ ದಕ್ಷಿಣ ಕನ್ನಡ ಜಿಲ್ಲೆಯಾ, ಸುಳ್ಯ ವಿಧಾನಸಭಾ ಕ್ಷೇತ್ರದ 207,ಬಿಳಿನೆಲೆ ಗ್ರಾಮದ ಗೋಪಾಲಕೃಷ್ಣ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 110 ರಲ್ಲಿ ಕಂಡುಬಂದ ದೃಶ್ಯ ಇದು.
ಎ 26 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಚಿತ್ರ ಕಲಾವಿದ ದಿನೇಶ್ ಕುಂದರ್, ಹಾಗೂ ಬಳಗದವರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

ಲೋಕಸಭಾ ಚುನಾವಣಾ ಹಬ್ಬಕ್ಕೆ ಗೋಪಾಲಕೃಷ್ಣ ಪ್ರೌಢಶಾಲೆಯ ಸಖಿ ಮತಗಟ್ಟೆಯು ಮದುವಣಗಿತ್ತಿ ಯಂತೆ ಸಿಂಗಾರ ಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚುನಾವಣಾ ಆಯೋಗದ ಆದೇಶದಂತೆ ಸಖಿ ಮತಗಟ್ಟೆಯು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ ಮಾತ್ರವಲ್ಲದೆ ಈ ಮತಗಟ್ಟೆಯ ಎಲ್ಲಾ ಅಧಿಕಾರಿಗಳು ಮಹಿಳೆಯರೇ ಆಗಿದ್ದು ಮತದಾನದ ದಿನದಂದು ಎಲ್ಲಾ ಮಹಿಳಾ ಅಧಿಕಾರಿಗಳು ಗುಲಾಬಿ ವಸ್ತ್ರದಲ್ಲಿ ಕಂಗೊಳಿಸಲಿದ್ದಾರೆ.
0 ಕಾಮೆಂಟ್‌ಗಳು