ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು ಕಾಲೇಜಿನ ಗಣಕ-ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದುರ್ಗಾಲಕ್ಷ್ಜಿ ಜಿ.ಸಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ 5 ಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಈಕೆಗೆ 583 ಅಂಕ ಬಂದಿತ್ತು.ಕಡಿಮೆ ಅಂಕ ಕಂಡು ಪ್ರತಿಭಾವಂತ ವಿದ್ಯಾರ್ಥಿನಿಯು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ಮರು ಮೌಲ್ಯಮಾಪನದಲ್ಲಿ ದುರ್ಗಾ ಲಕ್ಷ್ಮಿ ಅವರಿಗೆ 10 ಹೆಚ್ಚುವರಿ ಅಂಕ ಬಂದಿದೆ,ಅರ್ಥಶಾಸ್ತ್ರ ದಲ್ಲಿ 8 ಅಂಕ ಮತ್ತು ವ್ಯವಹಾರ ಅಧ್ಯಾಯನದಲ್ಲಿ 2 ಅಂಕ ಪಡೆಯುವ ಮೂಲಕ 10 ಅಂಕ ಅಧಿಕ ಪಡೆದರು.
ಮೌಲ್ಯಮಾಪಕರ ಎಡವಟ್ಟಿನಿಂದ ಗ್ರಾಮೀಣ ಪ್ರತಿಭೆಗೆ 10 ಅಂಕಗಳು ಖೋತಾ ಆಗುತ್ತಿತ್ತು.ಆದರೆ ಇದೀಗ ಮರು ಮೌಲ್ಯಮಾಪದ ಬಳಿಕ ದುರ್ಗಾಲಕ್ಷ್ಮಿ 593 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಪಡೆದು ವಿದ್ಯಾಸಂಸ್ಥೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈಕೆಯು ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಾಯನ,ಅರ್ಥಶಾಸ್ತ್ರಗಳಲ್ಲಿ 100ಕ್ಕೆ 100 ಅಂಕ ಪಡೆದರೆ, ಸಂಸ್ಕೃತ, ಗಣಕ ವಿಜ್ಞಾನಗಳಲ್ಲಿ 99 ಹಾಗೂ ಇಂಗ್ಲೀಷ್‌ನಲ್ಲಿ 95 ಅಂಕ ಪಡೆದಿದ್ದಾರೆ.
0 ಕಾಮೆಂಟ್‌ಗಳು