ಕಡಬ : ಬೃಹತ್ ಗಾತ್ರದ ಹೆಬ್ಬಲಿಸಿನ ಮರ ಕಡಿದು ಸಾಗಾಟಕ್ಕೆ ಯತ್ನ ಮೂವರ ಬಂಧನ....!

ಕಡಬ : ಆಲಂಕಾರಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಮೂವರನ್ನು ವಶಕ್ಕೆ ಪಡೆದು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಜೂ.1ರಂದು ನಡೆದಿದೆ. 

ಕಡಬ ತಾಲೂಕಿನ ಅಲಂಕಾರು ಗ್ರಾಮದ ಕಕ್ವೆ ಸಮೀಪದ ಪಜ್ಜಾಪು ಎಂಬಲ್ಲಿ ಈ ಘಟನೆ ನಡೆದಿರುವುದಾಗಿದೆ. ಸುಮಾರು ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ .ಆರೋಪಿಗಳ ವಿವವರನ್ನು ಅರಣ್ಯ ಇಲಾಖೆ ಒದಗಿಸಿಲ್ಲ 
ಅಕ್ರಮವಾಗಿ ಹೆಬ್ಬಲಸು ಮರ ಕಡಿದ ಸಂದರ್ಭ ವಿದ್ಯುತ್ ತಂತಿಗೆ ಬಿದ್ದಿದ್ದು ಹೀಗಾಗಿ ಮರ ಕಡಿದ ಪ್ರಕರಣ ಬೆಳಕಿಗೆ ಬಂದಿದೆ. ಮರ ಬಿದ್ದ ಕಾರಣ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ವಿದ್ಯುತ್ ಕಡಿತಗೊಂಡಿತ್ತು. 
ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಸ್ತಿಕಾರ್ಯಕ್ಕೆ ನಡೆಸಿದದ್ದಾರೆ. ಮೆಸ್ಕಾಂ ಇಲಾಖೆಗೆ ಆಗಿರುವ ನಷ್ಟವನ್ನು ಆರೋಪಿಗಳು ಭರಿಸಲು ಒಪ್ಪಿದ್ದಾರೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
 
ಇನ್ನು ಈ ಬಗ್ಗೆ ಪಂಜ ಆರ್.ಎಫ್.ಒ ಸಂಧ್ಯಾ ಅವರನ್ನು ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡದೆ ಅಲಂಕಾರ ಗ್ರಾಮದ ಪಜ್ಜಾಪು ಎಂಬಲ್ಲಿ ಅಕ್ರಮ ವಾಗಿ  
ಹೆಬ್ಬಲಸು ಮರ ಕಡಿದ ಪ್ರಕರಣ ಕ್ಕೆ ಸಂಬಂದಿಸಿದಂತೆ ಈಗಾಗಲೇ 3 ಜನ ಆರೋಪಿಗಳನ್ನು ಬಂದಿಸಲಾಗಿದ್ದು ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ಪತ್ತೆ ಹಚ್ಚಿ ತಕ್ಷಿರು ದಾಖಲು ಮಾಡಲಾಗಿರುತ್ತದೆ ಎಂದಷ್ಟೇ ತಿಳಿಸಿದ್ದು ಆರೋಪಿಗಳ ವಿವರವಾಗಲಿ ,ಮರವನ್ನು ಸರ್ಕಾರಿ ಜಾಗದಿಂದ ಕಡಿದಿದ್ದಾರ,ಖಾಸಗಿ ಜಾಗದಿಂದ ಕಡಿದಿದ್ದಾರ ಎಂಬುದನ್ನು ಬಹಿರಂಗ ಪಡಿಸಿಲ್ಲ.

0 ಕಾಮೆಂಟ್‌ಗಳು