ಕಡಬ: ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಗುಂಪು ಕಟ್ಟಿ ಠಾಣೆಯ ಮುಂದೆ ಪ್ರತಿಭಟನೆ ಕೂತ ಹಿನ್ನಲೆ ಕಡಬ ವಿಹಿಂಪದ 15 ಜನ ಕಾರ್ಯಕರ್ತರ ಮೇಲೆ ಕಡಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ಪರಿಶೀಲಿಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವನ್ನು ವಿರೋಧಿಸಿ, ದಿನಾಂಕ 01-06-2025 ರಂದು ರಾತ್ರಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ 1)ಪ್ರಮೋದ್ ರೈ, ನಂದುಗುರಿ, 2) ತಿಲಕ್ , ನಂದುಗುರಿ, 3) ಮೋಹನ, ಕೆರೆಕೋಡಿ, 4)ಚಂದ್ರಶೇಖರ, ನೂಜಿಬಾಳ್ತಿಲ, 5)ಮಹೇಶ್ ಕುಟ್ರುಪ್ಪಾಡಿ. 6)ಡೀಕಯ್ಯ ನೂಜಿಬಾಳ್ತಿಲ, 7) ಸುಜಿತ್ ಕುಟ್ರುಪ್ಪಾಡಿ., 8)ಶರತ್ ನಂದುಗುರಿ, 9)ಶ್ರೇಯತ್, ನಂದುಗುರಿ, 10)ಉಮೇಶ್, ನೂಜಿಬಾಳ್ತಿಲ, 11) ರಾದಾಕೃಷ್ಣ, ಕೆ. 12) ಜಯಂತ್, ಮತ್ತು ಇತರ ಮೂವರ ವಿರುದ್ಧ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 39/2025 ಕಲಂ: 189(2),190 BNS-2023 ರಂತೆ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು