Shocking Update : ಜೈಶ್ ಹೇ ಉಗ್ರ ಸಂಘಟನೆಯಿಂದ ಜಾಗರಣ ವೇದಿಕೆಯ ಮುಖಂಡರಿಗೆ ಜೀವ ಬೆದರಿಕೆ....!

ನ್ಯೂಸ್ ಡೆಸ್ಕ್ : ನಿಷೇಧಿತ ಜೈಶ್ ಹೆ ಮಹಮ್ಮದ್ ಉಗ್ರ ಸಂಘಟನೆಯಿಂದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಗೆ ಹಾಗೂ ರಕ್ಷಿತ್ ಬುಡೋಳಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಂಘದ ತಾಲೂಕು ಕಾರ್ಯವಾಹ ರಕ್ಷಿತ್ ಬುಡೊಲಿ ಯವರ ವಾಟ್ಸಪ್ ಗೆ ಪಾಕಿಸ್ತಾನ, ಅಫ್ಘಾನಿಸ್ಥಾನ, ಸೌದಿ ಅರೇಬಿಯ ದೇಶದ 3 ಮೊಬೈಲ್ ಸಂಖ್ಯೆಯಿಂದ ಮೆಸ್ಸೇಜ್ ಮತ್ತು ವಾಯ್ಸ್ ರೆಕಾರ್ಡ್ ಮಾಡಿ ಬೆದರಿಕೆ ಹಾಕಿದ್ದಾರೆ.”ಈ ಮುಸ್ಲಿಮ್ ಸಹೋದರನ ಕೊಲೆಯಲ್ಲಿ ಭಾಗಿಯಾಗಿರುವ ರಾಕೇಶ್ ಬುಡೋಳಿ, ನಿಮ್ಮ ಸಹಚರ ನರಸಿಂಹ ಮಾಣಿ ಹಾಗೂ ಇತರ ಎಲ್ಲ ಹೆಸರುಗಳು ನಮ್ಮ ಪಟ್ಟಿಗೆ ಸೇರಿಸಲಾಗಿದೆ. ನಾವು ದೂರವಿಲ್ಲ ನಾವು ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಶ್ ಶೆಟ್ಟಿ ಅವನಂತೆ ನಿಮ್ಮಿಬ್ಬರನ್ನು ನಾವು ಕೊಲ್ಲುತ್ತೇವೆ. ಜೈಶ್-ಎ-ಮೊಹಮ್ಮದ್‌ನ ಮುಜಾಹಿದ್ದೀನ್ ನವದೆಹಲಿಯನ್ನು ತಲುಪಿದ್ದೇವೆ. ನಾವು ಹೊಸದಿಲ್ಲಿಯಲ್ಲಿದ್ದೇವೆ” ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

0 ಕಾಮೆಂಟ್‌ಗಳು