Breaking: ಕರೆಂಟ್ ಶಾಕ್ ; ಸಹಾಯಕ ಪವರ್ ಮ್ಯಾನ್ ಮೃತ್ಯು...!

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಸಹಾಯಕ ಪವರ್ ಮ್ಯಾನ್ ವಿಜೇಶ್ ಜೈನ್ ಲೈನ್ ನಲ್ಲಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಓಡಿನ್ನಾಳ ಗ್ರಾಮದ ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ಜೈನ್ ದಂಪತಿಗಳ ಎರಡನೇ ಮಗ ವಿಜೇಶ್ ಜೈನ್ (27) ಎಂಬವರು ಓಡಿನ್ಮಾಳ ಗ್ರಾಮದ ಕುಮ್ಮುಂಜ ಎಂಬಲ್ಲಿ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮೇ.30 ರಂದು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ.


ಮೃತಪಟ್ಟ ವಿಜೇಶ್ ಜೈನ್ ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌ ಎಂದು ತಿಳಿದು ಬಂದಿದೆ.

0 ಕಾಮೆಂಟ್‌ಗಳು