ಹೆಂಡತಿಯ ಕಾಟ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಗಂಡ...!

ನ್ಯೂಸ್ ಡೆಸ್ಕ್ : ಹೆಂಡತಿ ಕಾಟಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.

ಸುನೀಲ್ ಮೂಲಿಮನಿ (33) ಆತ್ಮಹತ್ಯೆ ಮಾಡಿಕೊಂಡ ಪತಿ. ತನ್ನದೇ ಕಂಪ್ಯೂಟರ್ ಶಾಪ್‌ನಲ್ಲಿ ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 4 ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನ ಸುನೀಲ್ ಮದುವೆಯಾಗಿದ್ದರು. ಈಗ ದಂಪತಿಗೆ ಮೂರು ವರ್ಷದ ಮಗು ಇದೆ. 
ಆತ್ಮಹತ್ಯೆಗೂ ಮುನ್ನ ʻಮೈ ವೈಫ್ ಈಸ್‌ ರಿಜನ್ ಫಾರ್ ಮೈ ಡೆತ್ʼ ಅಂತ ಡೆತ್‌ನೋಟ್‌ ಬರೆದಿಟ್ಟು ಸುನೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

0 ಕಾಮೆಂಟ್‌ಗಳು